30 ಏಪ್ರಿಲ್, 2020

ಆರೋಗ್ಯ ಇಲಾಖೆ ಸಿಬ್ಬಂದಿಗೆ ಆರು ತಿಂಗಳ ವೇತನ ನೀಡಿ: ಸರ್ಕಾರಕ್ಕೆ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯ

 : ರಾಜ್ಯದಲ್ಲಿ ಕೋರೋನಾ ನಿಯಂತ್ರಣಕ್ಕಾಗಿ ದಿನದ ಇಪ್ಪತ್ತಾಲ್ಕು ತಾಸು ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿ ಕಳೆದ ಆರು ತಿಂಗಳಿನಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದು ತಕ್ಷಣವೇ ವೇತನ ಜೊತೆಗೆ ಪ್ರೋತ್ಸಾಹ ಭತ್ಯೆ ಬಿಡುಗಡೆಗೊಳಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎರಡು ತಿಂಗಳಿನಿಂದ ರಜೆಯೂ ಇಲ್ಲದೇ ಸಂಬಳವೂ ಇಲ್ಲದೇ ಕೆಲಸ ನಿರ್ವಹಿಸುತ್ತಿರುವ ಖಾಯಂ ನೌಕರರ ಹಾಗೂ ರಾಜ್ಯ ವಲಯದಡಿ ಹೊರಗುತ್ತಿಗೆಯಡಿ ನೇಮಕಗೊಂಡ ಶುಶ್ರೂಶಕಿಯರು,ಕಿರಿಂiÀi ಆರೋಗ್ಯ ಸಹಾಯಕರು ,ಗ್ರೂಪ್ ಡಿ ಸಿಬ್ಬಂದಿ,ವಾಹನ ಚಾಲಕ ಮತ್ತು ಪ್ರಯೋಗಶಾಳಾ ತಜÐರ ಸಂಬಳ ಕಳೆದ ಆರು ತಿಂಗಳಿನಿಂದ ಬಿಡುಗಡೆಯಾಗದೇ ಮನೆಬಾಡಿಗೆ ತರಕಾರಿ ಹಾಲು ರೇಶನ್‍ಗೂ ಹಣವಿಲ್ಲದೇ ತುಂಬಾ ತೊಂದರೆಯಲ್ಲಿದ್ದಾರೆ.

ತಮ್ಮ ಕುಟುಂಬದ ಆರೋಗ್ಯದ ಹಿತಾಶಕ್ತಿಯನ್ನು ಪಣಕ್ಖಿಟ್ಟು ರಾಜ್ಯದ ಜನತೆಯ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಆರೋಗ್ಯ ಇಲಾಖೆ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಸಿಬ್ಬಂದಿಗಳ ಮೇಲಿನ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದ್ದು ಆರೋಗ್ಯ ಸಚಿವ ಶ್ರೀರಾಮುಲು ತಕ್ಷಣವೇ ಸಿಬ್ಬಂದಿಗಳ ಸಂಬಳ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ವಕ್ತಾರ ಪತ್ರೇಶ್ ಒತ್ತಾಯಿಸಿದರು

ಕೊರೊನಾ ಟೆಸ್ಟ್ ಕಿಟ್‌ಗಳಿಗೆ ಕೇಂದ್ರ ಸರ್ಕಾರದಿಂದ ಚೀನಾಕ್ಕೆ ದುಪ್ಪಟ್ಟು ಹಣ ಕೊಟ್ಟ ಆರೋಪ

ಸರಿಯಾದ ಫಲಿತಾಂಶ ನೀಡುತ್ತಿಲ್ಲ ಎಂದು ರಾಜ್ಯ ಸರರ್ಕಾರಗಳು ತಡೆಹಿಡಿದಿದ್ದ ಕೊರೊನಾ ಟೆಸ್ಟ್ ಕಿಟ್‌ಗಳಿಗೆ ಕೇಂದ್ರ ಸರ್ಕಾರವು ಚೀನಾಕ್ಕೆ ಎರಡುಪಟ್ಟು ಹಣವನ್ನು ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ವಿತರಕ ಮತ್ತು ಆಮದುದಾರರ ನಡುವೆ ವಿವಾದವಾಗಿ ದೆಹಲಿ ಹೈ ಕೋರ್ಟಿನಲ್ಲಿ ಕಾನೂನು ಸಮರ ನಡೆಯುತ್ತಿರುವುದರಿಂದ ಈ ವಿಚಾರ ಹೊರ ಬಂದಿದೆ. ಕೊರೊನಾ ಪರೀಕ್ಷಾ ಕಿಟ್‌ಗಳ ಭಾರತೀಯ ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ದುಪ್ಪಟ್ಟು ಬೆಲೆಗೆ ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಿತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೇಂದ್ರ ಸರ್ಕಾರ ಮಾರ್ಚ್ 27 ರಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮೂಲಕ ಚೀನಾದ ಸಂಸ್ಥೆ ವೊಂಡ್‌ಫೊದಿಂದ ಐದು ಲಕ್ಷ ಕ್ಷಿಪ್ರ ಆಂಟಿ ಬಾಡಿ ಪರೀಕ್ಷಾ ಕಿಟ್‌ಗಳನ್ನು ಆದೇಶಿಸಿತ್ತು.
ಏಪ್ರಿಲ್ 16 ರಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಕ್ಷಿಪ್ರ ಆಂಟಿಬಾಡಿ ಟೆಸ್ಟ್ ಮತ್ತು ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಒಳಗೊಂಡಂತೆ 6,50,000 ಕಿಟ್‌ಗಳನ್ನು ಭಾರತಕ್ಕೆ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
A total of 650,000 kits, including Rapid Antibody Tests and RNA Extraction Kits have been despatched early today from Guangzhou Airport to | @MEAIndia @HarshShringla @DrSJaishankar
585 people are talking about this
ಆಮದುದಾರ ಮ್ಯಾಟ್ರಿಕ್ಸ್ ಪರೀಕ್ಷಾ ಕಿಟ್‌ಗಳನ್ನು ತಲಾ 245 ರೂಗಳಿಗೆ ಚೀನಾದಿಂದ ಖರೀದಿಸಿದ್ದಾರೆ. ಇದನ್ನು ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ಮತ್ತು ಆರ್ಕ್ ಫಾರ್ಮಾಸ್ಯುಟಿಕಲ್ಸ್ ಕಿಟ್ಟನ್ನು‌ ತಲಾ 600 ರೂ.ಗೆ ಸರ್ಕಾರಕ್ಕೆ ಮಾರಾಟ ಮಾಡಿದೆ, ಅಂದರೆ ಶೇಕಡಾ 60 ರಷ್ಟು ಲಾಭವನ್ನು ಇಟ್ಟುಕೊಂಡಿದೆ.
ತಮಿಳುನಾಡು ಸರ್ಕಾರವು ತಲಾ 600 ರೂ.ಗೆ ಚೀನೀ ಕಿಟ್‌ಗಳನ್ನು ಇನ್ನೊಂದು ವಿತರಕರಾದ ಶಾನ್ ಬಯೋಟೆಕ್ ಮೂಲಕ ಖರೀದಿಸಿದಾಗ ವಿವಾದ ಉಂಟಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ತಮಿಳುನಾಡು ಮತ್ತು ಶಾನ್ ಬಯೋಟೆಕ್ ನಡುವಿನ ಸಹಿ ಇರುವ ಆದೇಶ ಪತ್ರವನ್ನು ಪ್ರಕಟಿಸಿದೆ.
ರಿಯಲ್ ಮೆಟಾಬಾಲಿಕ್ಸ್, ಮ್ಯಾಟ್ರಿಕ್ಸ್ ಆಮದು ಮಾಡಿದ ಕಿಟ್‌ಗಳಿಗೆ ತಾನು ವಿಶೇಷ ವಿತರಕ ಎಂದು ಹೇಳಿಕೊಂಡು ಹೈಕೋರ್ಟ್ ನಲ್ಲಿ ದೂರು ದಾಖಲಿಸಿದೆ. ಒಪ್ಪಂದವನ್ನು ಉಲ್ಲಂಘಿಸಿ ತಮಿಳುನಾಡು ಮತ್ತೊಂದು ವಿತರಕರಲ್ಲಿ (ಶಾನ್ ಬಯೋಟೆಕ್) ಕಿಟ್ ಪಡೆದುಕೊಂಡಿದೆ ಎಂದು ರಿಯಲ್ ಮೆಟಾಬಾಲಿಕ್ಸ್ ಆರೋಪಿಸಿದೆ.
ನ್ಯಾಯಾಲಯವು ವಿವಾದವನ್ನು ಆಲಿಸುತ್ತಿರುವಾಗ, ಬೆಲೆಯು ದುಪ್ಪಟ್ಟಾಗಿದೆ ಎಂಬುದನ್ನು ಕಂಡುಕೊಂಡು ಪ್ರತಿ ಕಿಟ್‌ಗಳ ಬೆಲೆಯನ್ನು 400 ರೂ.ಗೆ ಇಳಿಸುವಂತೆ ನಿರ್ದೇಶಿಸಿದೆ.
“ಕಳೆದ ಒಂದು ತಿಂಗಳಿನಿಂದ ಆರ್ಥಿಕತೆಯು ಸ್ಥಗಿತಗೊಂಡಿದೆ. ಜನರ ಸುರಕ್ಷತೆಯು ಆತಂಕಕಾರಿ ವಿಷಯವಾಗಿದೆ. ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿದೆ ಎಂದು ಜನರಿಗೆ ಖಾತ್ರಿಪಡಿಸಲು, ಸಾಂಕ್ರಾಮಿಕ ವಿರುದ್ದದ ಯುದ್ಧದಲ್ಲಿ ತೊಡಗಿರುವವರನ್ನು ರಕ್ಷಿಸಲು, ದೇಶಾದ್ಯಂತ ವ್ಯಾಪಕವಾದ ಪರೀಕ್ಷೆಗಳನ್ನು ನಡೆಸಲು ಕಡಿಮೆ ವೆಚ್ಚದಲ್ಲಿ ಪರೀಕ್ಷಾ ಕಿಟ್‌ಗಳು ತುರ್ತಾಗಿ ಲಭ್ಯವಾಗಬೇಕು. ಸಾರ್ವಜನಿಕ ಹಿತಾಸಕ್ತಿ ಖಾಸಗಿ ಲಾಭಕ್ಕಿಂತ ಹೆಚ್ಚಿರಬೇಕು. ಪಕ್ಷಗಳ ನಡುವಿನ ದೊಡ್ಡ ವಿವಾದ, ಚರ್ಚೆ ಸಾರ್ವಜನಿಕ ಒಳಿತಿಗೆ ದಾರಿ ಮಾಡಿಕೊಡಬೇಕು. ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಕಿಟ್‌ಗಳು / ಪರೀಕ್ಷೆಯನ್ನು ಜಿಎಸ್‌ಟಿಯನ್ನು ಒಳಗೊಂಡಂತೆ 400 ರೂ / ಮೀರದ ಬೆಲೆಗೆ ಮಾರಾಟ ಮಾಡಬೇಕು ”ಎಂದು ಹೈಕೋರ್ಟ್ ಹೇಳಿದೆ.


ಕಿಟ್‌ಗಳ ದುಪ್ಪಟ್ಟು ಬೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಅನುಮೋದಿತ ಶ್ರೇಣಿಯು ಶೀಘ್ರ ಟೆಸ್ಟ್ ಕಿಟ್‌ಗಾಗಿ 528 ರಿಂದ 795 ರೂ ಗಳ ದರವನ್ನು ಅನುಮೋದಿಸಲಾಗಿದೆ ಎಂದಿದೆ. “ಬೆಲೆ ಕಿಟ್‌ಗಳ ತಾಂತ್ರಿಕ ಅಂಶಗಳು, ಸೂಕ್ಷ್ಮತೆ, ನಿರ್ದಿಷ್ಟತೆ, ಇತ್ಯಾದಿ ಹಾಗೂ ಟೆಂಡರ್‌ನಲ್ಲಿ ಪಡೆದ ದರ, ಪೂರೈಕೆ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಕೌನ್ಸಿಲ್ ಹೇಳಿದೆ.
ಕಳೆದ ವಾರ, ಹಲವಾರು ರಾಜ್ಯಗಳು ದೂರು ನೀಡಿದ ನಂತರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವೊಂಡ್ಫೊ ಪರೀಕ್ಷಾ ಕಿಟ್‌ಗಳ ಬಳಕೆಯನ್ನು ನಿಲ್ಲಿಸಿತ್ತು.
ಮೂರು ರಾಜ್ಯಗಳು ಕಿಟ್‌ಗಳನ್ನು ಬಳಸಲು ನಿರಾಕರಿಸಿ, ದೋಷಗಳ ಬಗ್ಗೆ ದೂರು ನೀಡಿವೆ. ಕೇವಲ 5.4% ರಷ್ಟು ಪರೀಕ್ಷೆಗಳು ಮಾತ್ರ ಪರಿಣಾಮಕಾರಿ ಎಂದು ರಾಜಸ್ಥಾನ ಹೇಳಿತ್ತು. ಶೀಘ್ರ ಟೆಸ್ಟಿಂಗ್ ಕಿಟ್‌ಗಳ ಬಳಕೆಯನ್ನು ಎರಡು ದಿನಗಳವರೆಗೆ ತಡೆಹಿಡಿಯುವಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಾಜ್ಯಗಳನ್ನು ಕೇಳಿ ಕೊಂಡಿತ್ತು. ಕಿಟ್‌ಗಳು ಕೆಳಮಟ್ಟದ ಗುಣಮಟ್ಟದ್ದಾಗಿದೆ ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ.


naanu gouri

ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!

ಪಾತ್ರದ ಅಂತರಂಗವನ್ನೇ ಬಿಚ್ಚಿಡುವ ಬೆರಗುಹುಟ್ಟಿಸುವ ಕಣ್ಣು, ಪರಿಚಿತ ಭಾವ ಹುಟ್ಟಿಸುವ ದನಿ ಮತ್ತು ಆಪ್ತ, ಒಡನಾಡಿ ಎಂಬಷ್ಟು ಆಪ್ತತೆ ಹುಟ್ಟಿಸುವ ವ್ಯಕ್ತಿತ್ವ. ಇದು ಇರ್ಫಾನ್ ಖಾನ್ ಎಂಬ ಜಗತ್ತು ಕಂಡ ಅಪರೂಪದ ನಟನನ್ನು ಕಣ್ಣ ಮುಂದೆ ತರುವ ಕನಿಷ್ಟ ವಿವರ. ಆದರೆ, ಇರ್ಫಾನ್ ಎಂದರೆ ಅಷ್ಟೇ ಆಗಿರಲಿಲ್ಲ. ನೋಟ, ಭಾವ, ನಟನೆ, ತೆರೆ ಮೇಲಿನ ಪಾತ್ರವನ್ನೂ ಮೀರಿದ ಇನ್ನೇನೋ ವಿಶೇಷ ಚುಂಬಕ ಶಕ್ತಿ ಇರ್ಫಾನ್ ವ್ಯಕ್ತಿತ್ವಕ್ಕೆ ಇತ್ತು ಎಂಬುದಕ್ಕೆ ಆತ ಜಗತ್ತನ್ನು ಭೌತಿಕವಾಗಿ ತೊರೆದುಹೋದ ಈ ಕ್ಷಣವೇ ಸಾಕ್ಷಿ.
ಬಹುಶಃ ಇತ್ತೀಚಿನ ದಶಕಗಳಲ್ಲೇ ಯಾವೊಬ್ಬ ವ್ಯಕ್ತಿಯ ಅಗಲಿಕೆಯೂ ನೀಡದಷ್ಟು ನೋವನ್ನು ಇರ್ಫಾನ್ ಸಾವು ತಂದಿದೆ. ದೇಶ, ಭಾಷೆಗಳ ಗಡಿ ಮೀರಿ, ಆತನ ಅಭಿನಯದ ಒಂದು ತುಣುಕು ನೋಡಿದವರು ಕೂಡ ಎದೆಯೊಡೆದುಹೋಗಿದ್ದಾರೆ. ಒಂದೇ ಒಂದು ಸಿನಿಮಾ ನೋಡಿದವರು ಕೂಡ ಅಕ್ಷರಶಃ ತಮ್ಮದೇ ಮನೆಮಂದಿಯನ್ನು ಕಳೆದುಕೊಂಡಂತೆ ಕಣ್ಣೀರಾಗಿದ್ದಾರೆ. ಒಬ್ಬ ಕಲಾವಿದನಾಗಿ ಇರ್ಫಾನ್ ಸಾಧಿಸಿದ್ದ ಯಶಸ್ಸು ಆತನಿಗೆ ಕೇವಲ ಜನಪ್ರಿಯತೆಯನ್ನು ಮಾತ್ರ ತಂದುಕೊಡಲಿಲ್ಲ; ಅಭಿಮಾನವನ್ನು ಮಾತ್ರ ತಂದುಕೊಡಲಿಲ್ಲ. ಅಪಾರ ಜನಸಮೂಹದೊಂದಿಗೆ ಒಂದು ಆಳವಾದ ಪ್ರೀತಿ ಮತ್ತು ಅಪರೂಪದ ನಂಟನ್ನೂ ಬೆಸೆದಿತ್ತು ಎಂಬುದಕ್ಕೆ ಗುರುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿತುಳುಕಿದ ವಿದಾಯದ, ನೋವಿನ ಸಂದೇಶಗಳೇ ಸಾಕ್ಷಿ.
ನಟನೊಬ್ಬ ಕೇವಲ ಪಾತ್ರವಾಗಿ ತೆರೆಗೆ ಸೀಮಿತವಾಗಿದ್ದರೆ, ಅಥವಾ ಸಹಜ ಬದುಕನ್ನು ಮೀರಿದ(ಲಾರ್ಜರ್ ದ್ಯಾನ್ ಲೈಫ್) ಹೀರೋಯಿಸಂ ಮೂಲಕ ವರ್ಚಸ್ಸು ವೃದ್ಧಿಸಿಕೊಂಡರೆ ಸಾಕಷ್ಟು ಜನಪ್ರಿಯತೆ, ಫ್ಯಾನ್ ಫಾಲೋಯಿಂಗ್, ಬಾಕ್ಸ್ ಆಫೀಸ್ ಯಶಸ್ಸು, ಹಣ ಗಳಿಸಬಹುದು. ಸೂಪರ್ ಸ್ಟಾರ್ ಹೆಗ್ಗಳಿಕೆಯನ್ನೂ ಗಳಿಸಬಹುದು. ಆದರೆ, ಒಬ್ಬ ಸಾದಾ ಸೀದಾ ಮನುಷ್ಯನ ಎದೆ ಕಲಕುವ, ಕಣ್ಣೀರು ಮಿಡಿಯುವ ಮಟ್ಟಿಗಿನ ಕಕ್ಕುಲತೆಯನ್ನು ಅಗಲಿಕೆಯ ಹೊತ್ತಲ್ಲಿ ಪಡೆಯುವುದು ಸಾಧ್ಯವಿಲ್ಲ. ಅದಕ್ಕೆ ಇರ್ಪಾನ್ ಖಾನ್ ಆಗಿರಬೇಕಾಗುತ್ತದೆ. ನಟನೆ, ಅಭಿನಯ, ವರ್ಚಸ್ಸು, ಸ್ಟಾರ್ ಡಂ ಗಳನ್ನೆಲ್ಲಾ ಮೀರಿದ ಅಸಲೀ ಅಂತಃಕರಣ ಇರಬೇಕಾಗುತ್ತದೆ. ಹುಚ್ಚು ಅಭಿಮಾನದ, ಉಮೇದಿನ ಶಿಳ್ಳೆಗಳ ಬದಲಿಗೆ ಥಿಯೇಟರಿನ ಆಸನಕ್ಕೊರಗಿದರವರ ಎದೆಯಲ್ಲಿ ತಣ್ಣಗೆ ಇಳಿಯುವ ಅಂತರಂಗ ಬೆಸೆಯುವ ಒಂದು ಸಾಚಾತನ ಬೇಕಾಗುತ್ತದೆ. ನಟನೆಯ ತಾಂತ್ರಿಕ ಕರಸತ್ತುಗಳ ಮೀರಿ ನಟನೊಬ್ಬನ ವ್ಯಕ್ತಿತ್ವ ಪಾತ್ರದ ಜೀವಂತಿಕೆಗೆ ಎರಕ ಹೋಯ್ದಿರಬೇಕಾಗುತ್ತದೆ. ಅಂತಹ ಮಾಂತ್ರಿಕತೆ ಅಥವಾ ವಿಚಿತ್ರ ಪ್ರಾಮಾಣಿಕತೆ ಪಾತ್ರ ಮತ್ತು ನಟನ ನಡುವೆ ಪ್ರತ್ಯೇಕಿಸಲಾಗದ ಬಂಧವಾಗಿ ಬೆಸೆದಿರಬೇಕಾಗುತ್ತದೆ.
ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!
ಅದು ಇರ್ಫಾನ್ ಶಕ್ತಿ ಮತ್ತು ಸಹಜತೆ ಎರಡೂ. ಹಾಗಾಗಿಯೇ ಇಂದು ಆತನಿಗೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಿ ಬರುತ್ತಿರುವ ಪ್ರತಿಕ್ರಿಯೆಗಳಲ್ಲಿ, ಸಂದೇಶಗಳಲ್ಲಿ ಆತನ ನಟನೆಯ ಬಗ್ಗೆ, ಪ್ರತಿಭೆಯ ಬಗ್ಗೆ ಮಾತನಾಡಿದಷ್ಟೇ ಜನ, ಆತನ ವ್ಯಕ್ತಿತ್ವದ ಬಗ್ಗೆ, ಆತನ ಸಾಧನೆಯ ಬಗ್ಗೆ, ವಿನಮ್ರತೆಯ ಬಗ್ಗೆ, ಹಾಗೇ ಎದುರಿನ ಸವಾಲನ್ನು ಅಷ್ಟೇ ಘನತೆಯಿಂದ, ದಿಟ್ಟತನದಿಂದ ಎದುರುಗೊಂಡು ಸಾಧಿಸುತ್ತಿದ್ದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅದರಲ್ಲೂ ಇರ್ಫಾನ್ ಜೊತೆ ಕೆಲಸ ಮಾಡಿದ ನಟರು, ತಂತ್ರಜ್ಞರು, ರಂಗಕರ್ಮಿಗಳು, ಸಾಮಾಜಿಕ ಹೋರಾಟಗಾರರು,.. ಎಲ್ಲರೂ ಒಬ್ಬ ವ್ಯಕ್ತಿಯಾಗಿ ಇರ್ಫಾನ್ ಎಷ್ಟು ದೊಡ್ಡವರಾಗಿದ್ದರು, ಎಂಥ ಉನ್ನತ ಮಾನವೀಯ ಗುಣ ಹೊಂದಿದ್ದರು, ಎಷ್ಟು ಸಹಜ ಮತ್ತು ಕಾಳಜಿಯ ವ್ಯಕ್ತಿಯಾಗಿ ಅವರು ತಮ್ಮೊಂದಿಗೆ ಬೆರೆಯುತ್ತಿದ್ದರು ಎಂಬುದನ್ನೇ ಹೆಚ್ಚು ನೆನಪಿಸಿಕೊಂಡಿದ್ದಾರೆ.
ಬಹುಶಃ ಬಾಲಿವುಡ್ ಅಥವಾ ಭಾರತೀಯ ಸಿನಿಮಾ ಭಾಷೆಯಲ್ಲಿ ಯಾವುದೇ ಸ್ಟಾರ್ ಡಂ ಇರದ ನಟನಾಗಿಯೂ ಇರ್ಪಾನ್, ಈ ಪರಿಯ ಜನಪ್ರೀತಿಗೆ ಪಾತ್ರವಾಗಲು ಅವರ ನಟನೆ- ಅಭಿನಯ ಪ್ರತಿಭೆಯಷ್ಟೇ, ಅವರ ಅಂತರಂಗದ ವ್ಯಕ್ತಿತ್ವವೂ ಕಾರಣ.
ಇಂಗ್ಲಿಷಿನ ‘ದ ವಾರಿಯರ್’, ‘ದಿ ನೇಮ್ ಸೇಕ್’, ‘ಲೈಫ್ ಆಫ್ ಪೈ’, ‘ಸ್ಲಮ್ ಡಾಗ್ ಮಿಲೆನಿಯರ್’, ‘ಇನ್ ಫರ್ನೊ’ದಂತಹ ಸಿನಿಮಾಗಳು ಇರ್ಫಾನನನ್ನು ಜಾಗತಿಕ ರಂಗದಲ್ಲಿ ನಟನಾಗಿ ಪರಿಚಯಿಸಿದವು. ಹಿಂದಿಯಲ್ಲಿ ‘ಸಲಾಂ ಬಾಂಬೆ’ಯಿಂದ ಆರಂಭವಾಗಿ, ಭಾರೀ ಶ್ರೇಯಸ್ಸು ತಂದುಕೊಟ್ಟ ‘ಲಂಚ್ ಬಾಕ್ಸ್’, ‘ಪಾನ್ ಸಿಂಗ್ ತೋಮರ್’, ‘ಮಕ್ಬೂಲ್’, ‘ಹೈದರ್’, ‘ಪೀಕು’, ‘ಮದಾರಿ’, ‘ಕಾರವಾನ್’ ಮತ್ತು ಇತ್ತೀಚಿನ ‘ಅಂಗ್ರೇಜಿ ಮೀಡಿಯಂ’ವರೆಗೆ ಇರ್ಪಾನ್ ಅಭಿನಯಿಸಿದ ಸಿನಿಮಾಗಳು ಹಲವು. 90ರ ದಶಕದಲ್ಲಿ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕೂಡ ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತಿದ ನಟನೆ ಕೂಡ ಇರ್ಪಾನನದ್ದು. ಹಾಗೆ ನೋಡಿದರೆ; ಇರ್ಪಾನ್, ಈ ಸಿನಿಮಾ- ಧಾರಾವಾಹಿಗಳಲ್ಲಿ ಎಷ್ಟು ಗಮನ ಸೆಳೆದಿದ್ದರೋ ಅಷ್ಟೇ ರಂಗಭೂಮಿಯಲ್ಲೂ, ಸಾಮಾಜಿಕ ಚಟುವಟಿಕೆಗಳಲ್ಲೂ ಗಮನ ಸೆಳೆದಿದ್ದರು.
ಎರಡು ವರ್ಷದ ಹಿಂದೆ ತಮಗೆ ಗುಣಪಡಿಸಲಾಗದ ಅಪರೂಪದ ಕ್ಯಾನ್ಸರ್ ಇದೆ ಎಂಬುದು ಗೊತ್ತಾದ ಬಳಿಕವೂ ಆತನೊಳಗಿನ ಛಲಗಾರ, ಹೋರಾಟಗಾರ ಮತ್ತು ಅಪ್ಪಟ ಮನುಷ್ಯ ಎದೆಗುಂದಲಿಲ್ಲ. ಆಗ ಆತ ಲಂಡನ್ನಿನ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತು ಬರೆದ ಪತ್ರ ಎಂಥವರ ಎದೆಯಲ್ಲೂ ಅಪರೂಪದ ನಟ ಎಂಬ ಈ ಮನುಷ್ಯನ ಗಟ್ಟಿತನದ ಬಗ್ಗೆ, ಪ್ರಬುದ್ಧತೆಯ ಬಗ್ಗೆ ಹೆಮ್ಮೆ ಮೂಡಿಸುವಂತಿತ್ತು. ಅದೇ ಹೊತ್ತಿಗೆ ಆ ಪತ್ರ ಇಂಥ ಅಪರೂಪದ ಮನುಷ್ಯ ಎಂಥ ಭೀಕರ ಖಾಯಿಲೆಯ ದವಡೆಗೆ ಸಿಲುಕಿದ್ದಾನಲ್ಲಾ ಎಂಬ ನೋವನ್ನು ಹುಟ್ಟಿಸುತ್ತಿತ್ತು.
ಅದಾದ ಬಳಿಕವೂ ಇರ್ಫಾನ್ ಮೊನ್ನೆ ಮೊನ್ನೆ ಕರೋನಾ ಲಾಕ್ ಡೌನ್ ನಿಂದಾಗಿ ಬೀದಿಪಾಲಾದ ವಲಸೆ ಕಾರ್ಮಿಕರಿಗಾಗಿ ಮಿಡಿದವರು. ಅವರಿಗಾಗಿ ತಮ್ಮ ಕೈಲಾದ ನೆರವು ನೀಡಿದರು. ಎರಡು ದಿನಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದ ಇರ್ಫಾನ್, ಲಾಕ್ ಡೌನ್ ನಿಂದಾಗಿ ತಾಯಿಯ ಅಂತ್ಯಕ್ರಿಯೆಯಲ್ಲಿ ಖುದ್ದು ಭಾಗವಹಿಸಲಾಗದ ನೋವು ಅನುಭವಿಸಿದ್ದರು. ಅದಾದ ಮಾರನೇ ದಿನವೇ; ಮಂಗಳವಾರ ತಾನೇ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು ಮುಂಬೈನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಹೊತ್ತಿಗೆ ಈ ಮಾಂತ್ರಿಕ, ಜೀವಕಾರುಣ್ಯದ ನಟ ಬಾರದ ಲೋಕಕ್ಕೆ ಹೋದ ಸುದ್ದಿ ಬಂದಿತು.
ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!
ಎರಡು ವರ್ಷದ ಹಿಂದೆ ಇಂತಹದ್ದೊಂದು ಭಯಂಕರ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದೇನೆ. ನಾನು ನನ್ನ ಆಟವನ್ನು ಪ್ರಾಮಾಣಿಕವಾಗಿ ಆಡುವೆ, ನೋಡೋಣ, ಆಟದ ಕೊನೆ ಹೇಗೆ ಎಂದು .. ಎಂದು ಇರ್ಪಾನ್ ಹೇಳಿದ್ದಾಗಲೇ ಇಡೀ ಜಗತ್ತು ಅವರು ಆ ಆಟದಲ್ಲಿ ಗೆದ್ದು ಬರಲಿ ಎಂದು ಹಾರೈಸಿತ್ತು. ಸಂಕಟದಿಂದ ಮಿಡಿದಿತ್ತು. ಇದೀಗ ಕೊನೆಗೂ ಸಾವೇ ಗೆದ್ದಿದೆ. ಆದರೆ, ಈ 53 ವರ್ಷಗಳ ಬದುಕಿನಲ್ಲಿ ಇರ್ಫಾನ್ ಸಂಪಾದಿಸಿದ ಜನರ ಪ್ರೀತಿ ಮತ್ತು ಅಭಿಮಾನದ ಮುಂದೆ ನಿಜಕ್ಕೂ ಸಾವು ಸೋತಿದೆ. ಇರ್ಫಾನ್ ಗೆದ್ದಿದ್ದಾರೆ. ನಟನೆಯಿಂದ, ಅಭಿನಯದಿಂದ ಮುಂಬೈನ ಮಸಾಲಾ ಸಿನಿಮಾ ಭಾಷೆಯಲ್ಲಿ ಸ್ಟಾರ್ ಎನಿಸಿಕೊಂಡಿದ್ದರೋ ಇಲ್ಲವೋ.. ಆದರೆ, ಈಗ ನಿಜವಾಗಿಯೂ ತಾರೆಯಾಗಿದ್ದಾರೆ.
ಸಾವು ಮತ್ತು ಬದುಕಿನ ಲೆಕ್ಕಾಚಾರಗಳನ್ನು ಮೀರಿ ಎಲ್ಲಾ ಸಿನಿಮಾ ಪ್ರಿಯರ, ರಂಗಪ್ರಿಯರ ಮತ್ತು ಆ ಮೂಲಕ ಜೀವಪ್ರೀತಿಯ ಮನಸ್ಸುಗಳಲ್ಲಿ ಅಜರಾಮರ ತಾರೆಯಾಗಿದ್ದಾರೆ. ಆತನ ಆ ಸಾಧನೆಯಲ್ಲಿ ಅವರೊಳಗಿನ ನಟನ ಪಾತ್ರದಷ್ಟೇ, ಅಂತಃಕರಣದ ನೈಜ ಮನುಷ್ಯನ ಪಾತ್ರವೂ ದೊಡ್ಡದಿದೆ ಎಂಬುದು ಇರ್ಫಾನ್ ವೈಶಿಷ್ಟ್ಯ.
ವಿದಾಯ ಇರ್ಫಾನ್, ನೀವಿರದೆಯೂ ಇಲ್ಲಿ ಇರುತ್ತೀರಿ,, ಎಲ್ಲರೆದೆಯಲ್ಲೂ.. ಹೋಗಿಬನ್ನಿ!
prathidhwani 

ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ: ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ – ರಾಹುಲ್

ಭಾರತ ಬಿಟ್ಟು ಪರಾರಿಯಾಗಿರು ಬೃಹತ್‌ ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ ಮಾಡಿದ್ದು, ಈ ವಿಚಾರವನ್ನು ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಆಡಳಿತ ಪಕ್ಷದ ಸ್ನೇಹಿತರೇ ಉದ್ದೇಶಪೂರ್ವಕ ಸುಸ್ತಿದಾರರ (ಸಾಲ ತೀರಿಸದವರ) ಪಟ್ಟಿಯಲ್ಲಿರುವುದರಿಂದ ಆ ಪಟ್ಟಿಯನ್ನು ಲೋಕಸಭೆಯಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
“ನಾನು ಸಂಸತ್ತಿನಲ್ಲಿ ಒಂದು ಸರಳ ಪ್ರಶ್ನೆಯನ್ನು ಕೇಳಿದೆ. 50 ದೊಡ್ಡ ಬ್ಯಾಂಕ್ ಹಗರಣಗಾರರ ಹೆಸರನ್ನು ಹೇಳಿ ಎಂದು. ಅದಕ್ಕೆ ಹಣಕಾಸು ಸಚಿವರು ಉತ್ತರಿಸಲು ನಿರಾಕರಿಸಿದರು. ಈಗ ಆರ್‌ಬಿಐ ನೀಡಿರುವ ಪಟ್ಟಿಯಿಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಇತರ ಬಿಜೆಪಿ ಸ್ನೇಹಿತರ ಹೆಸರಿದೆ. ಅದಕ್ಕಾಗಿಯೇ ಅವರು ಸಂಸತ್ತಿನಿಂದ ಸತ್ಯ ಮರೆಮಾಚಿದ್ದಾರೆ” ಎಂದು ರಾಹು‌ಲ್‌ ಗಾಂಧಿ ವಿಡಿಯೋ ಒಂದನ್ನು ಟ್ವೀಟ್‌ ಮಾಡಿದ್ದಾರೆ.
संसद में मैंने एक सीधा सा प्रश्न पूछा था- मुझे देश के 50 सबसे बड़े बैंक चोरों के नाम बताइए।

वित्तमंत्री ने जवाब देने से मना कर दिया।

अब RBI ने नीरव मोदी, मेहुल चोकसी सहित भाजपा के ‘मित्रों’ के नाम बैंक चोरों की लिस्ट में डाले हैं।

इसीलिए संसद में इस सच को छुपाया गया।
31.6K people are talking about this
ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಆರ್‌ಬಿಐ 50 ಪ್ರಮುಖ ಉದ್ದೇಶಪೂರ್ವಕ ಡೀಫಾಲ್ಟರ್‌ಗಳ 68,607 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿರುವ ಮಾಹಿತಿ ನೀಡಿದೆ. ಆ ಮೂಲಕ ಭಾರತೀಯ ಬ್ಯಾಂಕ್‌ಗಳನ್ನು ವಂಚಿಸಿದ ಆರೋಪ ಇರುವವರ ಪರ ಕೇಂದ್ರ ಸರ್ಕಾರ ನಿಂತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
ದೇಶಬಿಟ್ಟು ಪರಾರಿಯಾದ ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಸೇರಿದಂತೆ 50 ಡೀಫಾಲ್ಟರ್‌ಗಳ 68,607 ಕೋಟಿ ರೂ.ಗಳ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು  ಮನ್ನಾ ಮಾಡಿದೆ. 2014 ರಿಂದ ಸೆಪ್ಟೆಂಬರ್ 2019 ರವರೆಗೆ ದೊಡ್ಡ ಬಂಡವಾಳಿಗರ 6.66 ಲಕ್ಷ ಕೋಟಿ ರೂ ಕೇಂದ್ರ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಲಾ ಅವರು ಆರ್‌ಟಿಐ ಉತ್ತರದ ಉನ್ನತ ಸಾಲಗಾರರ ಪಟ್ಟಿ ಬಿಡುಗಡೆ ಮಾಡಿ ಅವರ ಸಾಲ ಮನ್ನಾ ಏಕೆ ಮಾಡಲಾಗಿದೆ ಎಂಬ ಬಗ್ಗೆ ಪ್ರಧಾನಮಂತ್ರಿಯಿಂದ ಉತ್ತರಗಳನ್ನು ಬಯಸಿದ್ದೇವೆ ಎಂದು ಒತ್ತಾಯಿಸಿದ್ದಾರೆ.
“ಇದು ಮೋದಿ ಸರ್ಕಾರದ ಡ್ಯೂಪ್, ಮೋಸ ಮತ್ತು ನಿರ್ಗಮನ” ನೀತಿಯನ್ನು ಉತ್ತೇಜಿಸುವ ಒಂದು ಉತ್ತಮ ಪ್ರಕರಣವಾಗಿದೆ. ಇದನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ ಮತ್ತು ಪ್ರಧಾನಿ ಉತ್ತರಿಸಬೇಕಾಗಿದೆ “ಎಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಇದು ಮೋದಿ ಸರ್ಕಾರದ ತಪ್ಪು ಗ್ರಹಿಕೆಯ ಆದ್ಯತೆಗಳು ಮತ್ತು ಅಪ್ರಾಮಾಣಿಕ ಉದ್ದೇಶಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಸುರ್ಜೆವಾಲಾ ಹೇಳಿದ್ದಾರೆ.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು 10 ಲಕ್ಷ ಕೋಟಿಗಿಂತಲೂ ಹೆಚ್ಚು ಕೆಟ್ಟ ಸಾಲವನ್ನು ಎದುರಿಸುತ್ತಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಕಾನೂನು ಕ್ರಮದಿಂದ ಪಾರಾಗಲು ಶತಕೋಟ್ಯಾಧಿಪತಿಗಳು ದೇಶದಿಂದ ಪಲಾಯನ ಮಾಡಿದ ಘಟನೆಗಳು ಮತ್ತು ಹೆಚ್ಚಿನ ಆರ್ಥಿಕ ಹಾನಿಕಾರಕ ಘಟನೆಗಳ ನಂತರ ಈ ಕುರಿತು ತೀವ್ರ ಚರ್ಚೆ ನಡೆದಿದೆ.
ರಾಕ್ಷಸ ವ್ಯವಹಾರಗಳಿಗೆ ಮತ್ತು ಅವುಗಳ ಮಾಲೀಕರಿಗೆ ಬಿಜೆಪಿಯ ಸಾಮೀಪ್ಯವನ್ನು ಪ್ರತಿಪಕ್ಷಗಳು ಪ್ರಶ್ನಿಸಿದರೆ, 2014 ಕ್ಕಿಂತ ಮೊದಲು ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೇಲಿನ ಹೆಚ್ಚಿನ ಹಗರಣಗಳನ್ನು ಸರ್ಕಾರ ಆರೋಪಿಸುತ್ತದೆ. ಇದು ಕೇವಲ ಅವರ ಹಗರಣಗಳನ್ನು ಮುಚ್ಚಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸುಜೇವಾಲಾ ಹೇಳಿದ್ದಾರೆ.
naanugouri web article
collection:- pathresh hiremath

25 ಏಪ್ರಿಲ್, 2020

ಕೂಡ್ಲಿಗಿಯಲ್ಲಿ ಮಾಜಿ ಶಾಸಕ ಸಿರಾಜ ಷೇಖ್ ಬಡವರಿಗೆ 600 ಆಹಾರ ಕಿಟ್ ವಿತರಣೆ


ಕೂಡ್ಲಿಗಿ:-  ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ರಾದ  ಸಿರಾಜ್ ಶೇಕ್  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ *ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರ, ಅಂಬೇಡ್ಕರ್ ನಗರ ಮತ್ತು ಉಡುಸಮ್ಮ ಕಟ್ಟೆ ಕೆರೆ ಪ್ರದೇಶ* ಗಳಲ್ಲಿರುವ ಬಡ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಪದಾರ್ಥಗಳ *600 ಕಿಟ್* ಗಳನ್ನು ವಿತರಣೆ ಮಾಡಿದರು.


 *ಈ ಸಂದರ್ಭದಲ್ಲಿ* ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಗುರು ಸಿದ್ದನ ಗೌಡ, ಕೂಡ್ಲಿಗಿ ಮತ್ತು ಹೊಸ ಹಳ್ಳಿ ಬ್ಲಾಕ್ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ರಾದ ಮಾದಿಹಳ್ಳಿ ನಜೀರ್ ಸಾಬ್, ಜಿ. ಒಬಣ್ಣ,ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ರಾದ ಟಿ. ಉಮೇಶ್ ಹಾಗೂ ಅಜೇಯ್ ರಾಮಸಾಲಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ನಾಗಮಣಿ ಜಿಂಕಾಲ್ಪ.ಪಂ. ಸದಸ್ಯರಾದ  ಕೊತ್ಲಪ್ಪ, ಕಾವಲ್ಲಿ ಶಿವಪ್ಪ, ಶುಕೂರ್,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಗಳಿ ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನೌಶಾದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ,ಕಾಂಗ್ರೆಸ್ ಯುವ ಮುಖಂಡರಾದ ನಲ್ಲಮುತ್ತಿ ದುರ್ಗೆಶ್, ಮಲ್ಲಾಪುರ ರಾಘವೇಂದ್ರ, ಕಾಟಮಲ್ಲಿ ಕೊಟ್ರೇಶ್,ಡಾಣಿ ರಾಘವೇಂದ್ರ,ಕೆ ಕೆ ಹಟ್ಟಿ ಕೊತ್ಲೇಶ್  ,ವಕ್ತಾರ ಜಿಲಾನ್, ಶಬ್ಬೀರ್, ಮರಬದ ವೀರಭದ್ರಪ್ಪ , ಗೋವಿಂದ  ನಾಯ್ಕ, ಗುರುಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್‍ನ ಸತ್ಯದ ಕಹಿಯೂ.. ಬಿಜೆಪಿಯ ಕನಸುಗಳ ಮಾರಾಟಗಾರರ ಆಕóರ್ಷಣೆಯೂ..?

 ಭಾರತದಲ್ಲಿ ಮಾತಾಡುವ ಮೂಲಕ, ಮಾತನ್ನೇ ಬಂಡವಾಳವಾಗಿಸಿಕೊಂಡು, ಸುಳ್ಳುಗಳನ್ನೇ ಮಾತಾಗಿಸಿ, ವದಂತಿಗಳನ್ನು ಸತ್ಯವಾಗಿಸಿ, ಸತ್ಯಗಳನ್ನು ಸುಳ್ಳಿನ ಅಡಿಯಾಳಾಗಿಸಿ, ಸುಳ್ಳುಗಳ ಆಕಾಶ ಗೋಪುರ ಕಟ್ಟಿ, ದೇಶದ ಜನತೆಯನ್ನು ಆ ಗೋಪುರ ಹತ್ತಿಸಿದ್ದೇವೆ ಎನ್ನುವ ಭ್ರಮೆಯಲ್ಲಿರಿಸಿ ಅಧಿಕಾರಕ್ಕೆ ಯಾರಾದರೂ ಬಂದಿದ್ದರೆ ಅದು ಭಾರತೀಯ ಜನತಾ ಪಕ್ಷ ಮತ್ತು ಅದಕ್ಕೆ ಕಾರಣರಾದವರು ಬಿಜೆಪಿಯ ಮಾತಿನ ಮಲ್ಲರು ಜೊತೆಜೊತೆಗೆ ಬಿಜೆಪಿಯ ವಿವಿಧ ಅಂಗ ಸಂಸ್ಥೆಗಳ ಭಕ್ತಮಂಡಳಿ.

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಅತಿ ಹೆಚ್ಚು ನೆಚ್ಚಿದ್ದು ಮಾತುಗಾರರನ್ನು ಅದರಲ್ಲೂ ಹಿಪ್ನಾಟಿಸಂ ಶೈಲಿಯ ಮಾತಿನ ಮಲ್ಲರನ್ನು. ಓದಿಕೊಂಡಿರುವ ಜೊತೆಗೆ ಓದಿಕೊಂಡಿದ್ದನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ತಿರುಚುವ ಮಾತಿರುಮಣಿಗಳನ್ನು ಹುಡುಕಿ ಮಾತಾಡಿಸಲು ಶುರು ಹಚ್ಚಿದ ಬಿಜೆಪಿ ಸೀದಾ ಜನರ ಮನದೊಳಗೆ ಆಕ್ರೋಶ ಹುಟ್ಟಿಸುವ ಕಾಂಗ್ರೆಸ್ ರಾಜಕೀಯ ನಾಯಕರ ಸಿರಿವಂತಿಕೆ ಕೋಮುವಾದ, ವಂಶಪಾರಂಪರ್ಯ ರಾಜಕಾರಣವನ್ನು ಜನರ ಮನದೊಳಗೆ ತುಂಬಿ ಒಂದು ಪಕ್ಷದ ಬಗ್ಗೆ ರೇಜಿಗೆ ತುಂಬುವ ಕೆಲಸವನ್ನು ವ್ಯವಸ್ಥಿತವಾಗಿ ಮಾತು ಹಾಗೂ ಬರವಣಿಗೆ ಮೂಲಕ ಮಾಡಿದರು.

ಕರ್ನಾಟಕದ ವಿಷಯಕ್ಕೆ ಬರುವುದಾದರೆ ಮಾಜಿ ಸಚಿವ ದಿ. ಬಿ ವಿ ಆಚಾರ್ಯ, ಸಚಿವರಾದ ಸುರೇಶಕುಮಾರ್, ಸಿಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಅರವಿಂದ ಲಿಂಬಾವಳಿ ಸುನಿಲ್ ಕುಮಾರ್ ಮಾಜಿ ವಿಧಾನ ಪರಿಷತ್ ಸದಸ್ಯ ಗೋ ಮಧುಸೂಧನ, ರವಿಕುಮಾರ್, ವಾಮನಾಚಾರ್ಯ, ಚಕ್ರವರ್ತಿ ಸೂಲಿಬೆಲೆ ಮಾಧ್ಯಮಗಳಲ್ಲಿ ವಿವಿಧ ಸಭೆ ಸಮಾರಂಭಗಳಲ್ಲಿ ಮಾಡಿದ್ದು ಇದನ್ನೇ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಚಿಕ್ಕಮಗಳೂರಿನ ಬಾಬಾಬುಡನಗಿರಿಯ ದತ್ತಪೀಠದವರೆಗೆ ಮಾತಾಡಿ ಮಾತಾಡಿಯೇ ಇವರೆಲ್ಲಾ ಶಾಸಕರಾದರು ಸಚಿವರಾದರು. ವಿಶೇಷವೆಂದರೆ ಈ ನಾಯಕರ ಮಾತುಗಳು ಇಂದಿಗೂ ನಿಂತಿಲ್ಲ. ಬೆಂಕಿಯ ಕೆನ್ನಾಲಿಗೆ ಇವರ ನಾಲಿಗೆ ದಾಟಿ ಹೊರಹೋಗಿಲ್ಲ. ಮಾತಿನ ಬೆಲೆ ಕಾಂಗ್ರೆಸ್‍ಗಿಂತ ಬಿಜೆಪಿಗೆ ಹೆಚ್ಚು ಗೊತ್ತಿದೆ. ಹಾಗಾಗಿ ಅವರು ಇನ್ನು ಮಾತಾಡುತ್ತಲೇ ಇದ್ದಾರೆ.. !

ಕಾಂಗ್ರೆಸ್ ಪಕ್ಷ ಸ್ವಾತಂತ್ರ ಚಳುವಳಿಯಲ್ಲಿ ಪ್ರಖರ ಮಾತಿನ ಶಕ್ತಿಯುಳ್ಳ ನಾಯಕರನ್ನು ಹೊಂದಿದ್ದು ಬಿಟ್ಟರೆ ಇತ್ತೀಚೆಗೆ ಇಂತಹ ತೀಕ್ಷಣ ಮಾತಿನ ಛಾತಿಯುಳ್ಳ ನಾಯಕರನ್ನು ಮೇಲೆತ್ತುವ ಪ್ರಯತ್ನ ಮಾಡಲಿಲ್ಲ. ದೇಶದಲ್ಲಿ ಮಾತಿನ ಮೂಲಕವೇ ಬಿಜೆಪಿ ಮಾತುಗಾರನ ಬಂಡವಾಳ ಬಯಲಿಗೆಳೆಯುವ ಮೂಲಕ ಕಾಂಗ್ರೆಸ್ ಮರುಕಟ್ಟುವ ಸನ್ನಿವೇಶ ಸೃಷ್ಟಿಯಾಗಿದೆ. ಬಿಜೆಪಿ ನಾಯಕರ ಸುಳ್ಳುಗಳನ್ನು ಮಾಧ್ಯಮಗಳಲ್ಲಿ ಸೊಗಸಾಗಿ ಬಿಂಬಿಸುವವರ ಕೊರತೆ ಇಡೀ ದೇಶದಲ್ಲಿ ಕಾಣುತ್ತಿದೆ. ಮಾಧ್ಯಮಗಳು ಬಿಜೆಪಿ ಪರವಾಗಿವೆ ಎನ್ನುವ ಆರೋಪಕ್ಕಿಂತ ಬಿಜೆಪಿಯ ವೈಫಲ್ಯವನ್ನು ಪರಿಣಾಮಕಾರಿಯಾಗಿ ಹೇಳುವ ನಾಯಕರ ಕೊರತೆ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಪರಿಣಾಮಕಾರಿಯಾಗಿ ಸಂಸದೀಯಭಾಷೆಯ ನೇರದಾಳಿ ಹಾಗೂ ದಾಖಲೆಗಳ ಮೂಲಕ ಮಾಧ್ಯಮಗಳ ಮುಂದೆ ಕಾಂಗ್ರೆಸ್ ನಾಯಕರು ತೆರಳಬೇಕಿದೆ. ಕೇವಲ ಪ್ರಧಾನಿ ಮೋದಿಯನ್ನು ಟೀಕಿಸುವುದು, ಕೋಮುವಾದದ ಬಗ್ಗೆ ಮಾತಾಡುವುದು ಬಿಟ್ಟು ಮೋದಿಯವರ ಆಡಳಿತ ವೈಫಲ್ಯವನ್ನು ಎತ್ತಿ ಹಿಡಿಯುವಲ್ಲಿ ಕಾಂಗ್ರೆಸ್ ಎಡವಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮಾಜಿ ಸಂಸದರಾದÀ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್, ಸಂಸದ ಎಲ್ ಹನುಮಂತಯ್ಯ, ಫ್ರೊ.ರಾಜೀವಗೌಡ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ವಿ ಆರ್ ಸುದರ್ಶನ್, ಸಿ ಎಂ ಇಬ್ರಾಹಿಂ, ಕೆ ದಿವಾಕರ್, ನಾಗರಾಜ ಯಾದವ್, ರಾಣಿ ಸತೀಶ್, ಮುರಳೀಧರ ಹಾಲಪ್ಪ ಸೇರಿದಂತೆ ಯುವ ಪೀಳಿಗೆಯ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಎ ಎನ್ ನಟರಾಜಗೌಡ, ಮಂಜುನಾಥ್ ಅದ್ದೆ, ಸೂರ್ಯಮುಕುಂದರಾಜ್, ಲಾವಣ್ಯ ಬಲ್ಲಾಳ್, ಮಂಚನಹಳ್ಳಿ ಐಶ್ವರ್ಯ ಮಹದೇವ್‍ರಂತಹ ಪರಿಣಾಮಕಾರಿಯಾಗಿ ಅಧಿಕೃತವಾಗಿ ಭಾಷೆಯ ಮೇಲೆ ಹಿಡಿತವುಳ್ಳ ಕೆಲವೇ ಕೆಲವು ನಾಯಕರು ಸೊಗಸಾಗಿ ಮಾತನಾಡುವವರಿದ್ದಾರೆ. ಆದರೆ ಅವರಿಗೆ ಪ್ರಮುಖ ಆಯಕಟ್ಟಿನ ಹುದ್ದೆಗಳೇ ದೊರಕುವುದಿಲ್ಲ. ಅವರು ಮಾತಾಡುತ್ತಲೇ ಇದ್ದಾರೆ ಅಧಿಕಾರ ಬೇರೆಯವರಿಗೆ ದೊರಕುತ್ತದೆ. ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳಲು ಇಂತಹ ನಾಯಕರು ಬೇಕು. ಅಧಿಕಾರವಿದ್ದಾಗ ಇವರ ಬುದ್ಧಿವಂತಿಕೆ ಪಾಂಡಿತ್ಯ ಜ್ಷಾನಕ್ಕೆ ಬೆಲೆ ಬರುವುದಿಲ್ಲ.

ಕನಸುಗಳನ್ನು ಮಾರಾಟ ಮಾಡುತ್ತಲೇ ಸುಳ್ಳಿನ ಸಾಮ್ರಾಜ್ಯ ವಿಸ್ತರಿಸುತ್ತಿರುವ ಬಿಜೆಪಿಗೆ ತಡೆಯೊಡ್ಡಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೊಗಸಾದ ಮಾತುಗಾರರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕತೆ ಇದೆ. ಕರ್ನಾಟಕದಲ್ಲಿ ಬಿಜೆಪಿಯ ಬಗ್ಗೆ ಹೇಳಲು ಸಾವಿರ ವೈಫಲ್ಯಗಳಿವೆ. ಕೇಳಲು ಕರ್ನಾಟಕದ ಜನತೆ ಕಾಯುತ್ತಿದೆ, ಸೊಗಸಾಗಿ ಹೇಳುವ ಬಾಯಿಗಳನ್ನು ಕಾಂಗ್ರೆಸ್ ಬಳಸಿಕೊಂಡು ಬಿಜೆಪಿ ವಿರುದ್ಧದ ಅಲೆಯನ್ನು ಮೆಟ್ಟಿಲಾಗಿಸಿ ಅಧಿಕಾರಕ್ಕೆ ಹತ್ತಿರಾಗಲು ಸುಸಮಯ.

ಕರ್ನಾಟಕ ಕಾಂಗ್ರೆಸ್ ಮಾಧ್ಯಮ ಮತ್ತು ಸಂವಹನ ವಿಭಾಗಕ್ಕೆ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅಧ್ಯಕ್ಷರಾಗಿದ್ದು ಚುರುಕಿನ ಗ್ರಹಣ ಶಕ್ತಿಯ, ಓದು ಮತ್ತು ಬರವಣಿಗೆ ಬಲ್ಲ, ವಾಕ್ಚಾತುರ್ಯವುಳ್ಳ ಯುವಕರನ್ನು ವಕ್ತಾರರಾಗಿ, ಪ್ಯಾನೆಲಿಸ್ಟ್‍ಗಳಾಗಿ ನೇಮಿಸಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಬರಹಗಳಲ್ಲಿ ಕ್ರಿಯಾಶೀಲನಾಗಿದ್ದ ನಾನು ಕೂಡಾ ಹೊಸದಾಗಿ ನೇಮಕಗೊಂಡಿದ್ದೇನೆ.

ಕಾಂಗ್ರೆಸ್ ಮಾತಿನ ಶಕ್ತಿಯನ್ನು, ಮಾತಿನ ತೀಕ್ಷಣತೆಯನ್ನು ಅರ್ಥ ಮಾಡಿಕೊಳ್ಳದೇ ಹೋದರೇ ‘’ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಸತ್ಯವಾಗುತ್ತೆ’’ ಎನ್ನುವ ಹಿಟ್ಲರ್‍ನ ಆಸ್ಥಾನ ಮಂತ್ರಿ ಗೊಬೆಲ್ಸ್ ನೀತಿ ಅನುಸರಿಸಿ ಬಿಜೆಪಿ ಮತ್ತೆ ಸಾಮ್ರಾಜ್ಯ ವಿಸ್ತರಿಸಿದರೂ ಅಚ್ಚರಿಯಿಲ್ಲ. ಕಾಂಗ್ರೆಸ್ ಅಧ್ಯಕ್ಚ ಡಿಕೆ ಶಿವಕುಮಾರ್ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್, ಸೇರಿದಂತೆ ಎಲ್ಲಾ ನಾಯಕರು ಮಾಧ್ಯಮ ಮತ್ತು ಜನರನ್ನು ಎದುರಿಸುವ ವಕ್ತಾರರ ತಂಡವನ್ನು ಸಜ್ಜುಗೊಳಿಸಲು ಯೋಚಿಸಬೇಕಿದೆ.
ಪತ್ರೇಶ್ ಹಿರೇಮಠ್
 ವಕ್ತಾರರು 
ಕೆಪಿಸಿಸಿ ಬೆಂಗಳೂರು
9844338881

ಡಿಕೆಶಿಗೆ ಕೆಪಿಸಿಸಿ ಸಾರಥ್ಯ.. ಚುರುಕಾಯಿತು ಕಾಂಗ್ರೆಸ್ ಪಡೆ ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಜನರ ನಡುವೆ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ..!

ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗಾಗಿ ಗುಜರಾತ್ ಶಾಸಕರ ರಕ್ಷಣೆ ಹೊಣೆಹೊತ್ತು ಯಶಸ್ವಿಯಾಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಇಡಿ, ಐಟಿ, ಸಿಬಿಐ ದಾಳಿಗೆ ಗುರಿಯಾಗಿದ್ದ ಡಿಕೆ ಶಿವಕುಮಾರ್ ಈಗ ಕರ್ನಾಟಕ ಕಾಂಗ್ರೆಸ್‍ನ ನೂತನ ಸಾರಥಿ. ಪಕ್ಷದ ಆದೇಶ ಖಡಕ್ಕಾಗಿ ಪಾಲಿಸುವ ಹಾಗೂ ರಾಜ್ಯದ ಯಾವುದೇ ಮೂಲೆಯ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವ ನಾಯPತ್ವ ಗುಣವುಳ್ಳ ಡಿಕೆಶಿ ಹೋರಾಟಕ್ಕೂ ಸೈ ಎಂತಹ ಅಪಾಯ ಎದುರಿಸಲೂ ಸಜ್ಜಾಗುವ ವರ್ಚಸ್ವೀ ನಾಯಕ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಆದೇಶ ಪಾಲಿಸುತ್ತಾ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಾಗಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡುವಷ್ಟು ಎತ್ತರಕ್ಕೆ ಬೆಳೆದ ಡಿಕೆಶಿ ಸರ್ವ ಜಾತಿ ಧರ್ಮಗಳ ಜನತೆ ಒಪ್ಪುವ ನಾಯಕವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ,ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ಜೊತೆಗೆ ಸಚಿವಗಿರಿ ಅನುಭವಿಸಿ ರಾಜ್ಯದೆಲ್ಲೆಡೆ ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಡಿP Éಶಿವಕುಮಾರ್ ಪ್ರತಿ ಜಿಲ್ಲೆಯಲ್ಲೂ ತಮ್ಮ ಬೆಂಬಲಿಗರ ಆಪ್ತ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಅದರಲ್ಲೂ ಪಕ್ಷದ ಯುವ ಪಡೆ ಡಿಕೆಶಿ ಪರ ಮೋಹ ಬೆಳೆಸಿಕೊಂಡಿದ್ದು ಕೂಡಾ ಅತಿ ಹೆಚ್ಚಾಗಿ ಯುವಕರ ಮೇಲೆ ಏಕಾಗ್ರತೆ ಸಾಧಿಸಿದ್ದ ಡಿಕೆಶಿಯವರ ಚಾಣಾಕ್ಷತೆ ಎಂದರೆ ತಪ್ಪೇನಲ್ಲ.ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ತಕ್ಷಣವೇ ಪಕ್ಷದ ಕಛೇರಿಯಲ್ಲಿ ಸರಣಿ ಸಭೆ ನಡೆಸಿ ಸಂಘಟನೆಗೆ ಚುರುಕು ಮೂಡಿಸಬೇಕೆನ್ನವಷ್ಟರಲ್ಲಿ ಮನುಕುಲಕ್ಕೆ ಮಹಾಮಾರಿಯಾದ ಕರೋನಾ ಸೋಂಕು ರಾಜ್ಯದೆಲ್ಲೆಡೆ ಹರಡಿ ಲಾಕ್‍ಡೌನ್ ಜಾರಿಯಾಗಿ ಪಕ್ಷದ ಸಂಘಟನೆಗೆ ಅಡಚಣೆಯಾಯಿತು.ತಕ್ಷಣವೇ ಚುರುಕಾದ ಡಿ ಕೆ ಶಿವಕುಮಾರ್ ಕೋರೋನಾ ವೈರಸ್ ನಿಂದ ಸಂಕಷ್ಟದಲ್ಲಿರುವ ಜನತೆಗೆ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಹೇಗೆ ಸ್ಪಂದಿಸಬಹುದು ಎನ್ನುವ ನಿಟ್ಟಿನಲ್ಲಿ ಯೋಚಿಸಿ ಕೋವಿಡ್ 19 ಕಾರ್ಯಪಡೆಯನ್ನು ಮಾಜಿ ಸಚಿವರಾದ ರಮೇಶ್ ಕುಮಾರ್ ಮತ್ತು ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಹಿರಿಯರ ಸಮಿತಿ ರಚಿಸಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಹೇಗೆ ಸಹಾಯ ಮಾಡಬಹುದು ಎಂದು ಸಲಹೆ ಪಡೆದರು. ಸರ್ಕಾರದ ಆದೇಶಗಳನ್ನು ಎಲ್ಲರೂ ಪಾಲನೆ ಮಾಡಲು ಸೂಚಿಸುತ್ತಾ ಸರ್ಕಾರದ ನಿರ್ದಾರಗಳಿಗೆ ಬೆಂಬಲಿಸಿ ಕೋರೋನಾ ವೈರಸ್ ನಿವಾರಣೆಗೆ ಟೊಂಕಕಟ್ಟಿ ನಿಂತರುಹಿರಿಯ ನಾಯಕರ ಸಲಹೆ ಪಡೆದು ಕಾಂಗ್ರೆಸ್ ಪಕ್ಷದ ವತಿಯಿಂದ ಕೋವಿಡ್ 19 ಪರಿಹಾರ ನಿಧಿ ಸ್ಥಾಪಿಸಿ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಸ್ಥಳೀಯ ಸಂಸ್ಥೆ ಜನ ಪ್ರತಿನಿಧಿಗಳು,ಹಾಗೂ ಪಕ್ಷದ ಪದಾಧಿಕಾರಿಗಳು ನಿಗದಿ ಮೊತ್ತ ದೇಣಿಗೆ ನೀಡಲು ತಕ್ಷಣವೇ ಸುತ್ತೋಲೆ ಹೊರಡಿಸಿ ಪರಿಹಾರ ಸಂಗ್ರಹಕ್ಕೆ ಆದ್ಯತೆ ನೀಡಿದರುಇಡೀ ರಾಜ್ಯದಾದ್ಯಂತ ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಜನರ ನೆರವಿಗೆ ನಿಲ್ಲಲು ಪ್ರತಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ “ಕೋವಿಡ್ 19 ಟಾಸ್ಕಫೋರ್ಸ ಸಮಿತಿ’ ರಚಿಸಿ ರಾಜ್ಯದೆಲ್ಲೆಡೆಯಿಂದ ವಾಸ್ತವ ವರದಿ ತರಿಸಿಕೊಂಡು ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದರು.ಡಿಕೆಶಿಯವರ ಸಲಹೆಯಂತೆ ಇಡೀ ರಾಜ್ಯದಾದ್ಯಂತ ಬಡಜನರಿಗೆ ದಿನಸಿ, ಮಾಸ್ಕ್’ ಸ್ಯಾನಿಟೈಸರ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾಂಗ್ರೆಸ್ ನ ನಾಯಕರು ಕಾರ್ಯಕರ್ತರು ಟಾಸ್ಕಫೋರ್ಸ ಮುಖಾಂತರ ನೀಡಿ ಸಂಕಷ್ಟಕ್ಕೀಡಾದ ಜನತೆಯ ಜೊತೆ ಕೈ ಜೋಡಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರಾದ ರಿಜ್ವಾನ್ ಅರ್ಷದ್, ಜಮೀರ್ ಅºಮದ್ ಖಾನ್  ನಿತ್ಯವೂ ಆಹಾರದ ಪೊಟ್ಟಣ ವಿತರಣೆ, ಉಚಿತ ಮಾತ್ರೆ ವಿತರಣೆ ಮಾಡಿ ಕಾಂಗ್ರೆಸ್ ಬದ್ಧತೆ ಪ್ರದರ್ಶಿಸಿದರು.ಇನ್ನೂ ಕೆಲವು ಕಡೆ ರೈತರ ಬೆಳೆಗೆ ಮಾರುಕಟ್ಟ ಇಲ್ಲದೇ ರೈತರ ಸಂಕಷ್ಟ ಕಂಡು ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಶಾಸಕರಾದ ಸಿರಾಜ್ ಷೇಖ್ ಹೊಲದಲ್ಲಿಯೇ ಫಸಲು ಖರೀದಿಸಿ ಬಡವರಿಗೆ ಹಂಚಿ ನೆರವಾದರು. ಇನ್ನೂ ಕೆಲ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಬಳ್ಳಾರಿ ಗ್ರಾಮಾಂತರದ ನಾಗೇಂದ್ರ ಪ್ರತಿ ಹಳ್ಳಿ ತಿರುಗಿ ಬಡಜನರಿಗೆ ನೆರವಾಗುವ ಜೊತೆಗೆ ಕೋರೋನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಶುಚಿತ್ವ ಕಾಪಾಡಲು ಜನತೆಗೆ ಮನವಿ ಮಾಡಿದರು.ಆಡಳಿತದಲ್ಲಿ ಇರುವ ಬಿಜೆಪಿಗಿಂತ ಕಾಂಗ್ರೆಸ್ ಸಂಕಷ್ಟಕ್ಕೀಡಾದ ಜನತೆಯ ನೆರವಿಗೆ ಮುಂದೆ ಬಂದಿದ್ದು ಎಲ್ಲರಿಗೂ ಢಾಳಾಗಿ ಗೋಚರಿಸುವ ಸಂಗತಿ. ಕೆಪಿಸಿಸಿ ಅಧ್ಯಕ್ಷ ಗಾದಿಗೇರಿದ ಕೂಡಲೇ ಕರ್ನಾಟಕದ ಜನತೆಗೆ ಈ ಮೂಲಕ ಒಂದು ಸಂದೇಶವನ್ನಂತೂ ನೀಡಿದಂತಾಯಿತು. ಅಧಿಕಾರವಿರಲಿ ಬಿಡಲಿ ನಿಮ್ಮ ನೆರವಿಗೆ ನಮ್ಮ ಕಾಂಗ್ರೆಸ್ ಬಳಗ ಹೆಗಲುಗೊಡಲಿದೆ ಎಂದು.ಪಕ್ಷದ ಚುಕ್ಕಾಣಿ ಹಿಡಿದು ಸರ್ಕಾರದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಂಡು ಜನರಿಗೆ ನೆರವಾದ ಡಿಕೆಶಿ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವ ಕಾಂಗ್ರೆಸ್ಸಿಗರ ನುಡಿ ನೂರಕ್ಕೆ ನೂರರಷ್ಟು ಸತ್ಯ.ಕಫ್ರ್ಯೂ ಮತ್ತು ಲಾಕ್ ಡೌನ್ ಸಮಸ್ಯೆಯಿಂದ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗದೆ ಹೊಸದಾಗಿ “ಜೂಮ್ ಆಪ್’ ಮೂಲಕ ಜಿಲ್ಲ ಕಾಂಗ್ರೆಸ್ ಮತ್ತು ಟಾಸ್ಕಫೋರ್ಸ, ಸಾಮಾಜಿಕ ಜಾ¯ತಾಣ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳದ ಪದಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಶ ಮೂಲಕ ಪ್ರತಿದಿನ ಸಭೆ ನಡೆಸಿ ಪಕ್ಷ ಮತ್ತು ಕಾರ್ಯಕರ್ತರು ಮಾಡಬೇಕಾದ ಕೆಲಸಗಳನ್ನು ತಿಳಿಸಿ ಜನರ ಸಂಕಷ್ಟಕ್ಕೆ ನೆರವಾಗಲು ತಿಳಿಸಿದರು.

ಪತ್ರೇಶ್ ಹಿರೇಮಠ್
ಮಾಧ್ಯಮ ವಕ್ತಾರರು,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು
ವಿಳಾಸ
ಪತ್ರೇಶ್ ಹಿರೇಮಠ್ಕೊಹಿಮ’’ ಬಸರಕೋಡು-583224ಹಗರಿಬೊಮ್ಮನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ9844338881e-mಚಿiಟ:- pathreshhm@gmail.com